ಸಿಂಧನೂರು, ಅ.೦೨- ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಮನೆಯಲ್ಲಿನ ನೀರಿನ ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿದೆ ಇದರ ಪರಿಣಾಮ ಅಬ್ಬಾಸ್ ಅಲಿ (೨೫) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವಿದ್ಯುತ್ ಬಟನ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿದ್ದು, ಕುಳಿತ ಸ್ಥಿತಿಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ತದನಂತರ ನೆಲಕ್ಕೆ ಬಿದ್ದಿದ್ದು, ಸ್ವಲ್ಪ ಹೊತ್ತಿನ ನಂತರ ಅವಘಡ ಸಂಭವಿಸಿರು ವುದು ಮನೆಯವರಿಗೆ ಗೊತ್ತಾಗಿದೆ. ಯುವಕ ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಐದು ತಿಂಗಳ ಹಿಂದಷ್ಟೆ ಮದುವೆ ಯಾಗಿದ್ದ ಎನ್ನಲಾಗಿದೆ.
ಇಡೀ ಮನೆಯ ಜವಾಬ್ದಾರಿ ಹೊತ್ತು ಆಸರೆಯಾ ಗಿದ್ದ ಯುವಕನನ್ನ ಕಳೆದುಕೊಂಡ ಕುಟುಂಬ ಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಊರಿಗೂರೆ ಯುವಕನ ಸಾವಿಗೆ ಕಂಬನಿ ಮಿಡಿದಿದೆ.